ಮಾಧ್ಯಮ ಮಂಥನ

ಮಾಧ್ಯಮದಲ್ಲಿ ಅನುಸರಣೆ ಹೆಚ್ಚಾಗುತ್ತಿದೆ. ಟಿ.ವಿ, ಪರದೆಯಲ್ಲಿ ಗುದ್ದಾಟ ನೋಡುವ ಮಂದಿ ಹೆಚ್ಚಾಗುತ್ತಿದ್ದಾರೆ. ಇದರ ಕೊನೆ ಸಮಾಜದಲ್ಲಿ ಇದೆ. ಇಂತಹ ಕಾರ್ಯಕ್ರಮ ತಡೆಯುವ ಕ್ಯಾಂಪಸ್‌ ಆಗಬೇಕಿದೆ ಎಂದು ಕನ್ನಡಪ್ರಭ ದಿನಪತ್ರಿಕೆ ಸಂಪಾದಕ ರವಿ ಹೆಗಡೆ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ರೇಡಿಯೋ ಪಾಂಚಜನ್ಯ 90.8 ಎಫ್.ಎಮ್ ಸಮುದಾಯ ಬಾನುಲಿ ಕೇಂದ್ರ ಆಯೋಜಿಸಿದ ಅಖಿಲ ಕರ್ನಾಟಕ ಸಮುದಾಯ ಬಾನುಲಿ ಸಮ್ಮೇಳನ ದ ಮಾಧ್ಯಮ ಮಂಥನ ವಿಚಾರ ಗೋಷ್ಠಿಯನ್ನುಉದ್ದೇಶಿಸಿ ಅವರುಗುರುವಾರ ಮಾತನಾಡಿದರು.

ಸಿನೆಮಾ ನಿರ್ದೇಶಕ ಬಿ.ಎಸ್. ಲಿಂಗದೇವರು ಮಾತನಾಡಿ, ಜನರನ್ನು ಹಣಗಳಿಸಲು ತಲುಪುವುದು. ಸುದ್ದಿಯ ಬೇರೆ ಬೇರೆ ಆಯಾಮ ತೋರಿಸಲು ಹೋಗಿ ಆದ್ವಾನವಾಗುತ್ತಿದೆ. ನಮ್ಮಲ್ಲಿ ಸಮಾಜ ಸರಿಯಾದ ಆಯ್ಕೆ ಮಾಡದ ಹೊರತು ಮಾಧ್ಯವನ್ನು ದೂರುವಂತಿಲ್ಲ. ಸಿನಿಮಾ ಮಾಧ್ಯಮ ಕೂಡಾ ಹಾಗೆಯೇ. ಅದು ನಿರ್ದರಿತವಾಗುವುದು ಕಥೆ ಹಾಗೂ ಕಥೆಗಾರನ ಸಾಮರ್ಥ್ಯದ ಮೇಲೆ ಎಂದು ತಮ್ಮ ಅಭಿಪ್ರಾಯಪಟ್ಟರು.

ಕಸ್ತೂರಿ ಸುದ್ದಿವಾಹಿನಿಯ ಮುಖ್ಯಸ್ಥ ಗೌರೀಶ್ ಅಕ್ಕಿ ಮಾತನಾಡಿ ಬದಲಾಗುವ ವಿದ್ಯಾಮಾನಕ್ಕೆ ಮಾಧ್ಯಮ ಹೊರತಾಗಿಲ್ಲ. ಬದಲಾವಣೆ ಆಶ್ಚರ್ಯ ಎನಿಸಿದರೆ ಅದು ವಾಸ್ತವ. ಕೆಲವೊಂದು ನಿದರ್ಶನದಲ್ಲಿ ಮಾಧ್ಯಮವು ಮರುಪ್ರಸರನ ಮಾಡಿದ್ದು ಹಲವು ಉಪಯೋಗವನ್ನು ಉಂಟು ಮಾಡಿದೆ. ತನ್ನಲ್ಲಿರುವ ಸ್ವರೂಪವನ್ನು ನೋಡುವ ಎದೆಗಾರಿಕೆ ಸಮಾಜಕ್ಕೆ ಬೇಕಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಗೋಷ್ಟಿಯ ಸಮನ್ವಯಕಾರ, ಲೇಖಕ ಗಿರೀಶ್‌ರಾವ್(ಜೋಗಿ) ಮಾತನಾಡಿ, ಸಮಾಜದ ಪ್ರತಿಬಿಂಬ ಮಾಧ್ಯಮ. ಮಾಧ್ಯಮಗಳ ಮೇಲೆ ಟೀಕೆ ಮಾಡುವುದು ಬಹಳ ಸುಲಭ. ಆದರೆ ಮಾಧ್ಯಮ ಮೌಲ್ಯ ಮಾಪನ ಮತ್ತು ಬದಲಾವಣೆ ಅವಶ್ಯಕತೆ ಇದೆ. ಸಮಾಜದ ಜನರ ಆಯ್ಕೆಯ ಕುರಿತು ಪ್ರತಿ ವ್ಯಕ್ತಿ ಚಿಂತಿಸಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ದಟ್ಸ್‌ ಕನ್ನಡಡಾಟ್ ಕಾಂ ಸಂಪಾದಕ ಎಸ್.ಕೆ. ಶ್ಯಾಮ್ ಸುಂದರ್, ಹಿರಿಯ ಪತ್ರಕರ್ತ ಬೋನಂತಾಯ ಹರಿಶ್ಚಂದ್ರ ಭಟ್, ಇಂದಿನ ಮಾಧ್ಯಮದ ಪತ್ರಕರ್ತ ಪಿ.ಬಿ. ಹರೀಶ್‌ ರೈ, ಮಂಗಳೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕಿ ಎಸ್. ಉಷಾಲತಾ, ಮಂಗಳೂರು ರೆಡ್‌ಎಫ್.ಎಮ್‌ ಉದ್ಘೋಷಕ ಪ್ರಸನ್ನ, ಚಿಂತಕ ವಾದಿರಾಜ್, ರಾಷ್ಟ್ರ ಪ್ರಶಸ್ತಿ ವಿಜೇತ ಛಾಯಾಚಿತ್ರಕಾರ ರಾಮಚಂದ್ರ, ಮಂಗಳೂರು ವಿಶ್ವವಿದ್ಯಾನಿಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಿಯಾ ನಾಕ್ ಉಪಸ್ಥಿತರಿದ್ದರು.

ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್‌ಕುಮಾರ್‌ ಕಮ್ಮಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥಡಾ. ಹೆಚ್.ಜಿ. ಶ್ರೀಧರ್ ವಂದಿಸಿದರು.

Back To Top