Radio Panchajanya

Vivekananda Vidyavardhaka Sangha Puttur ® (VVS), formerly known as The Puttur Education Society was found in 1915 with an objective of providing education in the rural and backward areas in and around Puttur. Right now there are 54 institutions (including Shishumandira & K.G. Section) in the taluks of Puttur, Sullia, Bantwal, Beltangady of Dakshina Kannada Karnataka State and in Perla of Kasargod District Kerala State. The mission of Vivekananda Vidyavardhaka Sangha is to provide education to the youth so as to make them responsible citizens of this great country who possess deep sense of pride in our cultural heritage and ethical values. Together, we swear by ‘character-building’ as the prime goal of education.

Vivekananda Vidhyavardhaka Sangha, Puttur, an NGO with 100 years of selfless, strong and disciplined background, is presenting Radio Panchajanya – 90.8 FM, Community Radio Service for the people of Puttur. It is an adventure by the community, for the community and of the community with the noble objective of strengthening and educating our community through non visual medium.

In a similar and parallel mode to the knowledge prevalent in the written medium of communication, our society has a great treasure of knowledge and wisdom that shines forth through everyday speech. In a move to spread this treasure of wisdom from person to person, and to fulfil the noble deed of sharing of one’s voice and one’s experiences, Vivekananda Vidyavardhaka Sangha has stepped forth to launch this community radio for the people of Puttur region.

With the spirit of nationalism, and with the long-term goal of following and developing the values of our tradition, culture and heritage, Radio Panchajanya will broadcast programmes related to education, sports, science & technology, music, literature, agriculture, Yakshagana, dairy farming, social welfare, cultural progress, regional issues and programmes, festivals, regional fairs & other social events, literary fests & conferences, publications, advertisement etc.

May the community rise with our community radio, Radio Paanchajanya. May it reverberate all through Puttur, and also around, be it in business, in markets, in educational institutions, in transport media, and in every home.

The gratifying news is that Panchajanya is not limited to Puttur and it’s nearby areas alone. We’ve extended it so that is is an Internet Radio now onwards, because of which Panchajanya can be accessed by anyone anywhere in the globe.


ಪುತ್ತೂರಿನ ಶಿಕ್ಷಣ ಕಾಶಿ ಎಂದರೆ ಅದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ)

1915 ರಲ್ಲಿ ಸ್ಥಾಪನೆಯಾದ ಅಂದಿನ ಪುತ್ತೂರು ಎಜುಕೇಶನ್ ಸೊಸೈಟಿ (ರಿ) ಪುತ್ತೂರು, ಇಂದು ವಿವೇಕಾನಂದ ವಿದ್ಯಾವರ್ಧಕ ಸಂಘವಾಗಿ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕುಗಳಲ್ಲಿ ಮತ್ತು ಕೇರಳ ರಾಜ್ಯದ ಪೆರ್ಲದಲ್ಲಿ 54 ವಿದ್ಯಾಸಂಸ್ಥೆಗಳನ್ನು ಮುನ್ನಡೆಸುತ್ತಿದೆ.

ಪುತ್ತೂರಿನಲ್ಲಿ ವಿವಿಧ ಕಾಲೇಜು ಸಮುಚ್ಚಯಗಳು, ಗ್ರಾಮೀಣ ಪ್ರದೇಶಗಳಲ್ಲಿ 23 ಪ್ರಾಥಮಿಕ/ಪ್ರೌಢ ಶಾಲೆಗಳನ್ನು ಮತ್ತು 17 ಶಿಶುಮಂದಿರಗಳನ್ನು ಹೊಂದಿರುವ ನಮ್ಮ ಸಂಸ್ಥೆ 18,500 ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ತೆರೆದುಕೊಂಡ ವಿಶಾಲ ವಿದ್ಯಾವಿಹಾರ!

ಶ್ರೀ ಮೊಳಹಳ್ಳಿ ಶಿವರಾವ್, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಶ್ರೀ ಮಂಜಯ್ಯ ಹೆಗ್ಗಡೆ ಹಾಗೂ ಪುತ್ತೂರಿನ ಅನೇಕ ಗಣ್ಯರ ಸುದೀರ್ಘ ಪೂರ್ವಾಲೋಚನೆಯ ಫಲವಾಗಿ 1915 ರಲ್ಲಿ ಸ್ಥಾಪಿಸಲ್ಪಟ್ಟ ಈ ಸಂಘದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳೇ ಅಡಿಪಾಯ.

ರಾಷ್ಟ್ರೀಯತೆ, ಭಾರತೀಯ ಸಂಸ್ಕೃತಿ, ವ್ಯಕ್ತಿತ್ವದ ಸರ್ವಾಂಗೀಣ ವಿಕಾಸ,ಜ್ಞಾನ ವಿಜ್ಞಾನ, ಕೌಶಲ್ಯಾಧಾರಿತ ಶಿಕ್ಷಣ, ಮೌಲ್ಯಾಧಾರಿತ ವಿದ್ಯೆ ಸಂಘದ ಶೈಕ್ಷಣಿಕ ಆಶಯಗಳು.

ಇಂಥ ಪ್ರತಿಷ್ಠಿತ ವಿವೇಕಾನಂದ ವಿದ್ಯಾವರ್ಧಕ ಸಂಘ ಇದೀಗ ತನ್ನ ಸಮುದಾಯದತ್ತ ಮತ್ತೊಂದು ಹೆಜ್ಜೆ ಇಟ್ಟಿದೆ.
ಅದುವೇ ರೇಡಿಯೋ ಪಾಂಚಜನ್ಯ 90.8 ಎಫ್.ಎಂ.

ಧ್ವನಿಯೊಂದರ ಮೂಲಕ ಸಮಾಜದಲ್ಲಿ ಎಲ್ಲರ ಧ್ವನಿಯಾಗುವುದು ಈ ಹೆಜ್ಜೆಯ ಉದ್ದೇಶ. ರೇಡಿಯೋ ಪಾಂಚಜನ್ಯ ಸಮುದಾಯ ಬಾನುಲಿ ಕೇಂದ್ರ ಸಮುದಾಯದಿಂದ, ಸಮುದಾಯಕ್ಕಾಗಿ, ಸಮುದಾಯವೇ ನಡೆಸುವ ಒಂದು ವಿನೀತ ಪ್ರಯತ್ನ.

ನಮ್ಮ ಸಮಾಜದಲ್ಲಿ ಅಕ್ಷರ ಮಾಧ್ಯಮದಲ್ಲಿ ಎಷ್ಟು ಜ್ಞಾನ ಸಂಗ್ರಹಣೆಯಾಗಿದೆಯೋ ಅಷ್ಟೇ ಆಳವಾದ ವ್ಯಾಪಕವಾದ, ಸಾಂಪ್ರದಾಯಿಕ ವಿದ್ವತ್ತು ಜನರ ಮಾತುಗಳಲ್ಲಿದ್ದು, ಅದನ್ನು ಕಾಲದಿಂದ ಕಾಲಕ್ಕೆ, ಜನರಿಂದ ಜನರಿಗೆ, ಸಮುದಾಯದಿಂದ ಸಮುದಾಯಕ್ಕೆ ಕರೆದೊಯ್ಯುವ ಉದ್ದೇಶ ನಮ್ಮದು.

ರಾಷ್ಟ್ರೀಯತೆ ಭಾವದಿಂದ ಸಂಸ್ಕಾರ-ಸಂಸ್ಕೃತಿಗಳ ತಳಹದಿಯಲ್ಲಿ ರೂಪುಗೊಳ್ಳುತ್ತಿರುವ ಪಾಂಚಜನ್ಯದ ಇಂಚರಕ್ಕೆ ನೀವೂ ಧ್ವನಿಯಾಗ ಬನ್ನಿ. ರೇಡಿಯೋ ಪಾಂಚಜನ್ಯ 90.8 ಎಫ್ ಎಂ ನಲ್ಲಿ ಪ್ರತಿಭಾವಂತರು ಪ್ರತಿಭಾವಂತರಲ್ಲದವರೂ ಪಾಲ್ಗೊಳ್ಳಲು ಅವಕಾಶವಿದೆ. ಇಲ್ಲಿ ಶಿಕ್ಷಣ, ಕ್ರೀಡೆ, ವಿಜ್ಞಾನ, ಸಂಗೀತ, ತಂತ್ರಜ್ಞಾನ, ಸಾಹಿತ್ಯ, ಕೃಷಿ, ಅಡುಗೆ, ಯಕ್ಷಗಾನ, ಹೈನುಗಾರಿಕೆ, ಭಜನೆ, ಹರಿಕಥೆ, ತಾಳಮದ್ದಳೆ, ಇ-ವ್ಯವಹಾರ, ಸ್ವೋದ್ಯೋಗ, ಸಮುದಾಯ ಹಬ್ಬ, ವ್ಯಕ್ತಿ ಅಭ್ಯುದಯ, ಸಮಾಜ ಕಲ್ಯಾಣ, ಸಾಂಸ್ಕೃತಿಕ ಬೆಳವಣಿಗೆ, ಸ್ಥಳೀಯ ಸಮಾರಂಭಗಳು, ಉತ್ಸವಗಳು, ಮೇಳಗಳು, ಕಥೆ ಕವನಗಳು, ನಾಟಕಗಳು, ಮಕ್ಕಳ ಕಲರವ, ಹಿರಿಯರ ಗೌಜಿ, ಯುವವರ್ಗದ ಲಹರಿ, ಪ್ರಕಟಣೆಗಳು ಹೀಗೆ ಏನಿವೆ ಏನಿಲ್ಲ ಎಂಬಷ್ಟು ವಿಪುಲ ಅವಕಾಶಗಳು ಲಭ್ಯ.

ಎಲ್ಲವೂ ಸಮುದಾಯದಿಂದ ಬರಬೇಕು ಸಮುದಾಯಕ್ಕೆ ತಲುಪಬೇಕು ಎಂಬುದಷ್ಟೇ ನಮ್ಮ ಆಶಯ.

ರೇಡಿಯೋ ಪಾಂಚಜನ್ಯ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ತಾಲೂಕು ಭಾಗಗಳನ್ನು ಬಹಳಷ್ಟು ತಲುಪುತ್ತದೆ. ಅಲ್ಲದೇ ಕಾಸರಗೋಡು ಜಿಲ್ಲೆಯನ್ನೂ ಮುಟ್ಟುತ್ತದೆ.ತಲಕಾವೇರಿಯಲ್ಲೂ ನಮ್ಮ ತರಂಗಾಂತರಂಗ ಅನುರಣಿಸುತ್ತದೆ. ರೇಡಿಯೋ ಪಾಂಚಜನ್ಯ ಇಂಟರ್‌ನೆಟ್‌ನಲ್ಲೂ ಲಭ್ಯ. ಸಮುದಾಯ ಬಾನುಲಿ ಕೇಂದ್ರವೊಂದು ವೆಬ್ ರೇಡಿಯೋ ಆಗಿ ಲಭ್ಯವಿರುವುದು ನಮ್ಮ ವೈಶಿಷ್ಟ್ಯ.

ನಮ್ಮ ರೇಡಿಯೋವನ್ನು ನಿಮ್ಮದಾಗಿಸಿಕೊಳ್ಳಲು ಮತ್ತೊಂದು ಅವಕಾಶವನ್ನು ನಾವು ನಿಮಗೆ ಜಾಹೀರಾತು ಮೂಲಕ ನೀಡುತ್ತಿದ್ದೇವೆ.

ನಿಮ್ಮ ಸಂಸ್ಥೆಯ ಜಾಹೀರಾತು, ನಿಮ್ಮ ಮಕ್ಕಳ ಹುಟ್ಟುಹಬ್ಬ, ನಿಮ್ಮ ಮದುವೆ ವಾರ್ಷಿಕೋತ್ಸವದ ಆಚರಣೆ ಮುಂತಾಗಿ ನಿಮ್ಮ ಸಂತೋಷಗಳನ್ನು ನೀವು ಪುಟ್ಟ ಪುಟ್ಟ ಜಾಹೀರಾತುಗಳಲ್ಲಿ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಮೂಲಕ ಸಾದರಪಡಿಸಬಹುದು. ಇದಕ್ಕಾಗಿ ರೇಡಿಯೋ ಪಾಂಚಜನ್ಯ 90.8 ಎಫ್‌ಎಂ ನಿಮಗಾಗಿ ಬಗೆಬಗೆಯ ಸ್ಲಾಟ್‌ಗಳನ್ನು ತೆರೆದಿಟ್ಟಿದೆ.

ಬನ್ನಿ ನಮ್ಮ ಜೊತೆ ಹಂಚಿಕೊಳ್ಳಿ ನಿಮ್ಮ ಸಂತೋಷ, ಅದು ನಮ್ಮದೂ ಆಗಲಿ, ಎಲ್ಲರಿಗೂ ಕೇಳಲಿ….

ರೇಡಿಯೋ ಪಾಂಚಜನ್ಯ 90.8 ಎಫ್.ಎಂ
ಇದು ಜೀವ ಜೀವದ ಸ್ವರಸಂಚಾರ…

Back To Top